ಶ್ರೀಕರನು ಸದ್ಗುರುವಿನ ಪದಗಳು| ಪರಮಾತ್ಮನ ಪರಿಪೂರ್ಣ ರೂಪಗಳು
ಸಾಯಿನಾಥನ ಅಭಯ ಸೂತ್ರಗಳು| ನಂಬಿದವರಿಗೆ ಜ್ಞಾನ ದೀಪಗಳು
ಸಾಯಿನಾಥನ ಅಭಯ ಸೂತ್ರಗಳು| ನಂಬಿದವರಿಗೆ ಜ್ಞಾನ ದೀಪಗಳು
01. ಜಯ ಸಾಯಿನಾಥ ಪರಾತ್ಪರ ರೂಪ| ಜಯ ಶಿರಡೀಶ ಚಿನ್ಮಯ ರೂಪ
02. ಜನನಿ ಜನಕರು ಯಾರೋ ತಿಳಿಯದು| ಕುಲಮತ ವಿವರಗಳಲಸಲೇ ತಿಳಿಯದು
03. ದರುಶನವಿತ್ತನು ಬಾಲಫಕೀರನಾಗಿ| ಭಾವಕೆ ಸಿಲುಕದ ಭಗವಂತನಾಗಿ
04. ಮಹಲ್ಸಪತಿ ಮನ ಕರೆದಿಹ ದೈವವು| ಶಿರಡೀಪುರದಲಿ ನೆಲಸಿಹ ದೈವವು
05. ಕುದುರೆಯ ನೆಲೆಯ ತಿಳಿಸಿದುದಕೆ| ನೀರೂ ಬೆಂಕಿ ತೋರಿದ ರೀತಿಗೆ
06. ಚಾಂದಪಾಟೀಲು ಅಚ್ಚರಿಗೊಂಡನು| ಭಕ್ತನಾಗಿ ಶರಣಾಗತಿ ಬೇಡ್ದನು
07. ರವಿತೇಜಸ್ಸನು ಹೊಂದಿದ ಯೋಗಿ| ರಾಗದ್ವೇಷಗಳಿಲ್ಲದ ವಿರಾಗಿ
08. ಚಂದ್ರನ ಹೋಲುವ ಅಂದದ ಸಾಯಿ| ತಂಪನು ನೀಡುವ ಆಶಿಸ್ಸು ಹಾಯಿ
09. ಯೋಗಿರೂಪಧರ ಹೇ ಮಹಿಮಾನ್ವಿತ| ಪಾವನ ಚರಿತ ಋಷಿಜನ ಸೇವಿತ
10. ಭಕ್ತ ಜನಾವನ ಹೃದಯವಿಹಾರಿ| ಭವಭಯಹಾರಿ ಕಫ್ನಿಧಾರಿ
11. ಭಗವದ್ಗೀತೆಗೆ ಭಾಷ್ಯವ ಹೇಳ್ದನು| ಖುರಾನು ಪದಗಳ ಅರ್ಥವ ಪೇಳ್ದನು
12. ನರನರಗಳ ಶುದ್ಧಿ ಮಾಡ್ದನು| ಖಂಡಯೋಗದಲಿ ಘನನೆಂದು ತೋರ್ದನು
13. ಗುರುಕಟಾಕ್ಷವನು ಹೊಂದಿದ ಘನನು| ಆಶ್ರಿತರಿಗೆ ಆನಂದದಾತನು
14. ಅನ್ನದಾತ ಹೇ ಅಭಯ ಪ್ರದಾತ| ಆಶ್ರಿತರಿಗೆ ಆನಂದ ಪ್ರದಾತ
15. ಆಶಾಪಾಶಗಳಿಲ್ಲದ ಪವಿತ್ರನು| ಅಗಣಿತಗುಣಗಣ ದಿವ್ಯ ಚರಿತ್ರನು
16. ಭಕ್ತ ರಕ್ಷಣ ದೀಕ್ಷಾವ್ರತನು| ಭುಕ್ತಿ ಮುಕ್ತಿ ನೀಡುವ ದೇವನು
17. ಮೃತನಾಗಿಯು ಮತ್ತೆ ಜೀವವ ತಳೆದನು| ಮಾಧವ ಮಹಿಮೆಯ ಮಹಿಯಲಿ ತೋರ್ದನು
18. ನೀರಲಿ ಬೆಳಗುವ ದೀಪಕಾಂತಿಗಳು| ಅಚ್ಚರಿಗೊಂಡರು ಶಿರಡಿ ಪ್ರಜೆಗಳು
19. ಪಂಚಭೂತಗಳ ಅಧಿದೇವನು ತಾನು| ಭೂತಭೇತಾಳ ನಿರೋಧಕನು
20. ಭಿಕ್ಷೆ ಕೇಳ್ದನು ತನ ಭಕ್ತರನು| ಕರ್ಮ ಫಲಿತವನು ತನಗೆ ನೀಡೆಂದನು
21. ಕುಷ್ಠುರೋಗವು ಕಣ್ಮರೆಯಾಯಿತು| ಭಾಗೋಜೀಯು ದಾಸನಾದನು
22. ಬಾಯಿಜಾಮಾತೆಗೆ ಮೋಕ್ಷದಾತನು| ತಾತ್ಯಾಗೇನೊ ಪ್ರಾಣದಾತನು
23. ಶ್ಯಾಮಾ ನಂಬಿದ ಹಿತನೂ ನೀನೇ| ರಾಧಾಮಾಯಿಗೆ ಸ್ವಾಮಿಯು ನೀನೇ
24. ಚಾಂದೋರ್ಕರನೇ ಬಳಿಗೆ ಬಂದನು| ದಾಸಗಣುವು ನಿನ್ನ ಘನತೆಯ ಪಾಡ್ದನು
25. ಗೌಳಿಬುವಾಗೆ ವಿಠಲದೇವನು| ಖೋಜೋಕರನಿಗೆ ದತ್ತ ದೇವನು
26. ಬಾಂದ್ರಾವನಿತೆಗೆ ನೀನೇ ಗಣಪತಿ| ನಿಮೋಂಕರನಿಗೆ ನೀನೇ ಮಾರುತಿ
27. ರಾಮನೇ ನೀನೆಂದು ಡಾಕ್ಟರು ಪೇಳ್ದನು| ಸತ್ಯದೇವನೆಂದು ಗಣುವು ನುಡಿದನು
28. ಮೇಘಾ ನಂಬಿದ ಶಿವನೂ ನೀನೇ| ಫಾಲ್ಕೆ ನಂಬಿದ ಅಲ್ಲಾ ನೀನೇ
29. ಸಕಲದೇವತಾ ರೂಪವು ನೀನೇ| ಸಕಲ ಚರಾಚರ ಜಗತ್ತೂ ನೀನೇ
30. ಯೋಗಶಕ್ತಿಯಿಂದ ಬೆಳಗಿದ ಧುನಿ| ಪಾಪಗಳನ್ನು ದಹಿಸುವ ಪಾವನಿ
31. ಮೈನಾತಾಯಿಗೆ ರಕ್ಷಣೆಯಾಯಿತು| ಇಹಪರಗಳಿಗೆ ಔಷಧವಾಯಿತು
32. ಭಕ್ತರಿಗಿತ್ತನು ಬಾಬಾ ಊದಿ| ಧುನಿ ನೀಡಿದ ದಿವ್ಯ ವಿಭೂತಿ
33. ಗೋಧಿಯ ಹಿಟ್ಟಿಂದ ಓಡಿತು ಕಲರಾ| ಅನ್ನಾಸಾಹೇಬ್ಗೆದ ಆಯಿತು ಅಚ್ಚರ
34. ಸಾಯಿಲೀಲೆಗಳ ಕಥೆಯಾಗಿ ಬರೆದನು| ಹೇಮಾಡ್ ಪಂತೆಂದು ಹೆಸರು ಪಡೆದನು
35. ಮಸೀದು ದ್ವಾರಕ ಮಾಯಿಯಾಯಿತು| ಇಳೆಯಲಿ ಪಾವನ ತೀರ್ಥವಾಯಿತು
36. ಬೂಟಿ ಕಟ್ಟಿದ ಸಮಾಧಿ ಮಂದಿರ| ಆಶ್ರಿತರಿಗೆ ಅದು ಅಭಯ ಮಂದಿರ
37. ಅಂದವಾದ ಸಂಮೋಹನ ಮೂರ್ತಿ| ಸಚ್ಚಿದಾನಂದ ಚಿನ್ಮಯ ಮೂರ್ತಿ
38. ಜೈ ಜೈ ಹೇಳುವ ದಿವ್ಯ ಕೀರ್ತನೆ| ಭಕ್ತರು ಪಾಡುವ ನಾಲ್ಕು ಆರತಿ
39. ಈ ಚಾಲೀಸ ಸಾಯೀಶನದು| ಸುಖ ಸಂಪದಗಳ ತಂದುಕೊಡುವುದು
40. ರಾಜೇಂದ್ರನ ಮನದಲಿ ನುಡಿಸಿ| ಭಕ್ತರಿಗೆ ನೀಡ್ದನು ತನ ಲೀಲೆಗಳ
ಮಾನವ ರೂಪವ ತಾಳಿದ ಈಶ| ಮಂಗಳಕರನು ಈ ಶಿರಡೀಶ
ಸದಾ ಹೃದಯ ಮಂದಿರದಲಿ ನೆಲಸುವ ಸಾಮ ರೂಪಧರ ಸಾಯೀಶ
ಶ್ರಿ ಸಚ್ಚಿದಾನಂದ ಸದ್ಗುರು ಸಾಯಿನಾಥ ಮಹರಾಜಕೀ ಜೈ
ಸದಾ ಹೃದಯ ಮಂದಿರದಲಿ ನೆಲಸುವ ಸಾಮ ರೂಪಧರ ಸಾಯೀಶ
ಶ್ರಿ ಸಚ್ಚಿದಾನಂದ ಸದ್ಗುರು ಸಾಯಿನಾಥ ಮಹರಾಜಕೀ ಜೈ
No comments:
Post a Comment