2. ನನ್ನ ಭಕ್ತರಿಗೆ ಆಹಾರ, ವಸ್ತ್ರಗಳ ಅಭಾವ ಎಂದಿಗೂ ಇರುವುದಿಲ್ಲ. ಅವುಗಳಿಗೋಸ್ಕರ ಶ್ರಮಿಸಬೇಡಿ.
3. ನನಗೇನು ಕೊಟ್ಟರೂ ಅದರ ನೂರರಷ್ಟು ಹಿಂತಿರುಗಿಸುವೆ.
4. ನಿರಾಕಾರನಾದರೂ, ಸಮಾಧಿಯಿಂದಲೇ ನನ್ನ ಅಸ್ತಿಗಳು ನಿಮಗೆ ಧೈರ್ಯವನ್ನೂ, ನಂಬಿಕೆಯನ್ನೂ ನೀಡುತ್ತವೆ. ನನಗೆ ಶರಣಾಗತರಾದವರೊಂದಿಗೆ , ನಾನೇ ಅಲ್ಲದೆ ನನ್ನ ಸಮಾಧಿಯೂ ಮಾತಾಡುತ್ತದೆ, ಚಲಿಸುತ್ತದೆ ಮತ್ತು ಸಂಪರ್ಕಿಸುತ್ತದೆ. ನಾನು ನಿಮ್ಮೊಡನಿಲ್ಲವೆಂದು ಚಿಂತಿಸಬೇಡಿ. ನನ್ನ ಅಸ್ತಿಗಳು ಸದಾ ನಿಮ್ಮ ಯೋಗಕ್ಷೇಮವನ್ನು ವಹಿಸುತ್ತವೆ. ನನ್ನನ್ನು ಸ್ಮರಿಸಿ, ನನ್ನನ್ನು ನಂಬಿದರೆ ನಿಮಗೆ ಪ್ರಯೋಜನವಾಗುತ್ತದೆ.
5. ನನ್ನ ಆತ್ಮ ಅಜರಾಮರವಾದದ್ದು ಎಂದು ನಂಬಿ. ಅದನ್ನೇ ದೃಢ ಪಡಿಸಿಕೊಳ್ಳಿ.
6. ನಿಮ್ಮ ಜವಾಬ್ದಾರಿಯನ್ನು ನನ್ನ ಮೇಲೆ ಹಾಕಿದರೆ, ಅದನ್ನು ಖಂಡಿತವಾಗಿ ನಿಭಾಯಿಸುತ್ತೇನೆ.
7. ಷಿರ್ಡಿಯಲ್ಲಿ ಪಾದವಿಟ್ಟ ಕೂಡಲೆ, ನಿಮ್ಮ ಬಾಧೆಗಳೆಲ್ಲಾ ಸಮಾಪ್ತಿಯಾಗುತ್ತವೆ.
8. ದ್ವಾರಕಾಮಾಯಿಯ ಮೆಟ್ಟಿಲುಗಳನ್ನು ಹತ್ತಿದ ತಕ್ಷಣ, ದರಿದ್ರರು ಮತ್ತು ದೀನರು ಸಂತೋಷ, ಸಂತೃಪ್ತಿಯನ್ನು ಪಡೆಯುತ್ತಾರೆ.
9. ನನ್ನನ್ನು ಯಾವ ಭಾವದಿಂದ ಉಪಾಸಿಸಿದರೂ, ನಾನು ಅದೇ ಭಾವದಲ್ಲಿ ನಿರೂಪಿಸುವೆ.
10. ನಾನು ಯಾವಾಗಲೂ ಸಜೀವವಾಗಿರುತ್ತೇನೆ ಎನ್ನುವುದೇ ಶಾಶ್ವತವಾದ ಸತ್ಯ. ಇದೇ ನಿಮಗೆ ನನ್ನ ಆಶ್ವಾಸನೆ. ಇದನ್ನು ಎಂದಿಗೂ ಮರೆಯದಿರಿ.
11. ನನ್ನಲ್ಲಿ ಸರ್ವಶ್ಯ ಶರಣಾಗತಿಯಾದವರಿಗೆ ನಾನು ಸದಾ ಋಣಿಯಾಗಿರುತ್ತೇನೆ.
No comments:
Post a Comment